Wednesday, May 6, 2020

A simple translation

One of the key techniques in learning a new language is to start translating from/to that language to/from a known language, preferably your mother tongue.

One excellent source of courses, books, lectures and periodicals for learning Samskrita is Samskrita Bharati https://www.samskritabharati.in/

Samskrita Bharati's Sambhashana Sandesha https://sambhashanasandesha.in/, a subscription monthly magazine, is a treasure house for Samskrita enthusiasts.

I have attempted to translate the article लघुग्रंथालयः published in current issue of Sambhashana Sandesha (https://sambhashanasandesha.in/article/text/2020/05/0011-0011) by मुरलिः



ನಮ್ಮಲ್ಲಿನ ಬಹಳ ಹಳೆಯ ಪುಸ್ತಕಗಳು ಮನೆಯ ಕೊಣೆಯಲ್ಲಿ ಎಲ್ಲೊ ಇಟ್ಟ ನೆನಪು ನಮಗಿರುವುದು. 'ಇದು ಯಾರಿಗೂ ಲಾಭವಾಗುವುದಿಲ್ಲ. ಹೇಗೆ ಇದರ ಪ್ರಯೋಜನ ಸಿದ್ಧಿಯಾಗಬೇಕೊ ಹಾಗೆ ಎನಾದರು ಮಾಡಬೇಕು' ಎಂದು ಯೋಚಿಸಿದರು ಕೆಲವರು. ಹಾಗೆ ರೂಪ ಪಡೆಯಿತು ಲಘು ಗ್ರಂಥಾಲಯದ ಪರಿಕಲ್ಪನೆ.

'ಮನೆಯ ಮುಂದೆ ಒಂದು ಪೆಟ್ಟಿಗೆಯಲ್ಲಿ ಕೆಲವು ಪುಸ್ತಕಗಳನ್ನು ಇಟ್ಟರೆ ಮಾರ್ಗದಲ್ಲಿ ಅಲ್ಲಿ ಇಲ್ಲಿ ಹೋಗುವ ಜನರಿಗೆ ವೆಚ್ಚವಿಲ್ಲದೆ ಪುಸ್ತಕವನ್ನು ಪಡೆದುಕೊಂಡು ಒದಲು ಆಗಬೇಕು' ಎಂದು ಅವರ ಚಿಂತನೆ. ಆದರಿಂದ ಒಬ್ಬನು ತನ್ನ ಮನೆಯ ಮುಂದೆ ಒಂದು ಪೆಟ್ಟಿಗೆಯಲ್ಲಿ ಪುಸ್ತಕಗಳನ್ನು ಇಟ್ಟನು. ಜನರು ಆ ಪುಸ್ತಕಗಳನ್ನು ಕೇವಲ ಓದಲಿಲ್ಲ; ಯಾವಗೆಂದರೆ ಆವಾಗ ಅವರ ಪುಸ್ತಕಗಳನ್ನೂ ಅಲ್ಲಿ ಸ್ಥಾಪಿಸಿ ಉದಾತ್ತರಾದರು. ಸಮಯವಾಗುತ್ತಾ ಅನೇಕ ಬೇದಿಗಳಲ್ಲಿ ಈ ತರಹ ಲಘು ಗ್ರಂಥಾಲಯಗಳು ನಿರ್ಮಾಣಗೊಂಡವು ಕೂಡ.

ಈ ರೀತಿಯ ಪುಸ್ತಕಾಲಯಗಳ ವ್ಯವಸ್ಥೆಯನ್ನು ನಿರ್ವಹಿಸಲು ಹಾಗೂ ಪಟ್ಟಿ ಮಾಡಲು ಕೆಲವು ಅಂತರ್ಜಾಲ ಪುಟಗಳು ಕೂಡ ಬಂದವು (ಅಂತರ್ಜಾಲ ಕೊಂಡಿ - https://littlefreelibrary.org/ourmap).

ಈ ನೂತನ ಗ್ರಂಥಾಲಯವನ್ನು ಸ್ಥಾಪಿಸಲು ಇಚ್ಛಿಸುವವರು ಅಂತರ್ಜಾಲಸ್ಥಳದಿಂದ ಪೆಟ್ಟಿಗೆಯನ್ನು ಕೊಂಡೊ, ಅಥವಾ ಸ್ವಂತ ಪೆಟ್ಟಿಗೆಯನ್ನು ಹೇಗೆ ನಿರ್ಮಿಸಿಕೊಳ್ಳಬೇಕು ಎಂದು ತಿಳಿದು ಕೊಳ್ಳಬಹುದು. ಅವರ ಗ್ರಂಥಾಲಯವನ್ನು ಅಂತರ್ಜಾಲ ಸ್ಥಳದಲ್ಲಿ ಪಟ್ಟಿ ಮಾಡಲೂ ಅರ್ಹರಾಗುವರು. ಇದರಿಂದ ಯಾವ ನಗರಗಳಲ್ಲಿ ಎಲ್ಲೆಲ್ಲಿ ಪುಸ್ತಕಾಲಯಗಳು ಇವೆ ಎಂದು ಎಲ್ಲರಿಗು ತಿಳಿಯುತ್ತದೆ.

ಇದೀಗ ತೊಂಬತ್ತಕ್ಕಿಂತ ಅಧಿಕ ದೇಶಗಳಲ್ಲಿ ಈ ತರಹದ ಲಘು ಗ್ರಂಥಾಲಯಗಳು ಸ್ತಾಪಿತವಾಗಿವೆ. ಕೆಲವು ಜನರು ಪುಸ್ತಕಗಳ ಜೊತೆ ಹತ್ತಿರ ಕುಳಿತುಕೊಳ್ಳಲು ಕುರ್ಚಿಗಳು, ಪ್ರತಿ ಸ್ಪಂದನೆ ನೀಡಲು ಟಿಪ್ಪಣಿ ಪುಸ್ತಕವನ್ನು, ಬಾಲ್ಯರಿಗೆ ಸಿಹಿ ತಿನಿಸುಗಳನ್ನು ಸ್ಥಾಪಿಸಿದ್ದಾರೆ. ಕೆಲವೊಂದು ನಗರದಲ್ಲಿ ಬೃಹತ್ ಗ್ರಂಥಾಲಯಗಳೂ ಇವೆ ಕೂಡ. ತಮ್ಮ ಬೀದಿಯಲ್ಲೆ ಗ್ರಂಥಾಲಯ ಇರಬೇಕೆಂದರೆ ಪುಸ್ತಕಗಳನ್ನು ಸ್ವೀಕರಿಸಲು ಮತ್ತು ಕೊಡಲು ಅಧಿಕ ಜನರು ಅರ್ಹರಾಗಬೇಕು. ಪುಸ್ತಕಗಳ ಕಾರಣದಿಂದ ಬರುವ ಜನರ ಮಧ್ಯೆ ಪರಸ್ಪರ ಸಂಭಾಷಣೆ ಕೂಡ ಅಗುತ್ತದೆ. ಹಾಗೆ ನೂತನ ಗೆಳೆತನ ಕೊಡ ಬೆಳೆದುಕೊಳ್ಳುತ್ತದೆ. ಸಮೂಹ ಸ್ನೇಹ ಭಾವ ಕೂಡ ಮೂಡುತ್ತದೆ.

No comments:

Post a Comment

The Asian Saga

No, I am not referring to any tale of Asia's past glory or prophecies of its resurgence. I am only referring to James Clavell's seri...